Download
Kannada Fonts for Windows
ಕೇಂದ್ರದ_ಬಗ್ಗೆ ತರಬೇತಿ ಪುಸ್ತಕ_ಪ್ರಕಟಣೆ ಗ್ರಂಥಾಲಯ ಕಾಮ್_ನ್ಯೂಸ್ ಸಂಪರ್ಕಿಸಿ
ಮುಖ ಪುಟ
ಇಂಗ್ಲೀಷ್ ವಿಭಾಗ
ಕೃಷಿಪರ_ಮಾಧ್ಯಮ
ಕೃಷಿ-ಗ್ರಾಮಿಣ ಪತ್ರಿಕೆಗಳು
ಪುಸ್ತಕ_ಪರಿಚಯ
ಕೃಷಿಕಪರ ಸಂಘ-ಸಂಸ್ಥೆಗಳು
ಲೇಖನ/ನುಡಿಚಿತ್ರ
ಕಾಮ್ ಸಂಪನ್ಮೂಲ ವ್ಯಕ್ತಿಗಳು
ಪೊಟೋ_ಗ್ಯಾಲರಿ
ಪ್ರಕಟಣೆ
ಮಾಧ್ಯಮ ಬೆಳಕು
ಪೂರಕ ಕೊಂಡಿಗಳು
ದೇಣಿಗೆ
  ಪುಸ್ತಕ ಪರಿಚಯ

ಕೃಷಿ-ಗ್ರಾಮೀಣ-ಪರಿಸರ-ಮಾಧ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕಗಳ ಪರಿಚಯ ಇಲ್ಲಿದೆ.


ಶೀರ್ಷಿಕೆ/ಲೇಖಕರು ಪರಿಚಯ ಬೆಲೆ/ಪ್ರಕಾಶನ

ಮತ್ತೆ ಮತ್ತೆ ಕೂಗುಮಾರಿನಾಗೇಶ ಹೆಗಡೆ

ಭೂಮಿಯ ಈ ಮಗ್ಗುಲಿನಿಂದ ಆ ಮಗ್ಗುಲಿನ ವರೆಗೆ ಅಂದಂದಿನ ವಿಜ್ಞಾನ ವಿದ್ಯಾಮಾನಗಳನ್ನು ಒಟ್ಟಾರೆಯಾಗಿ ಹಿಡಿದು ಕಥೆಯಾಗಿ, ರಸಮಯ ವರದಿಯಾಗಿ ಇಲ್ಲಿ ಸ್ವಾರಸ್ಯಕರವಾಗಿ ಪೋಣಿಸಲಾಗಿದೆ.

ಬೆಲೆ: ರೂ. 99

ಭೂಮಿ ಬುಕ್ಸ್
150, ಮೊದಲನೇ ಮುಖ್ಯರಸ್ತೆ
ಶೇಷಾದ್ರಿಪುರಂ
ಬೆಂಗಳೂರು - 560 020
9901902402

ವಾರೆನೋಟಹೆಚ್.ಎನ್. ಆನಂದ

ಹಿರಿಯ ಪತ್ರಕರ್ತ ಹೆಚ್.ಎನ್. ಆನಂದ ಅವರ ಜನಪ್ರಿಯ ಅಂಕಣ 'ವಾರೆನೋಟ' ದ ಬರಹಗಳ ಸಂಗ್ರಹದ ಎರಡನೇ ಪರಿಷ್ಕೃತ ಮುದ್ರಣ. ಸುಮಾರು ಎರಡು ದಶಕದ ಹಿಂದೆ ಅಂದಿನ ರಾಜಕೀಯ, ಸಾಮಾಜಿಕ ವಿದ್ಯಾಮಾನಗಳನ್ನು ಗಮನದಲ್ಲಿಟ್ಟುಕೊಂಡು ಹೊಸೆದ ಹನಿಬರಹಗಳು.

ಬೆಲೆ: ರೂ. 110

ಅದಮ್ಯ ಪ್ರಕಾಶನ
103-ಬಿ, 3ನೇ ಅಡ್ಡರಸ್ತೆ
ಎಮ್.ಕೆ.ಸಿ.ಎಸ್. ಕಟ್ಟಡ
ಮೌಂಟ್ ಜಾಯ್ ವಿಸ್ತರಣೆ
ಹನುಮಂತನಗರ, ಬೆಂಗಳೂರು - 560 019

080- 65606058

ರೈತನಾಗುವ ಹಾದಿಯಲ್ಲಿ

raitanaaguva hadiyalli

ಎಸ್.ಎಮ್. ಪೆಜತ್ತಾಯ

ಹಿರಿಯ ಕೃಷಿಕ, ಬರಹಗಾರ ಎಸ್.ಎಮ್. ಪೆಜತ್ತಾಯ ಅವರು ವ್ಯವಸಾಯಕ್ಕೆ ಕಾಲಿಟ್ಟ ಮೊದಲ ಹೆಜ್ಜೆಗಳ ಮೆಲುಕು. ವ್ಯವಸಾಯದ ಆರಂಭದಲ್ಲಿ ತಾವು ನಡೆದ ಹಾದಿಯಲ್ಲಿ ಎದುರಾದ ಪ್ರಕೃತಿ ವಿಕೋಪಗಳು, ಸಾಮಾಜಿಕ ವೈಪರೀತ್ಯಗಳು, ಮನುಷ್ಯರ ಸ್ವಭಾವಗಳು ಇವುಗಳ ನಡುವೆಯೂ ಗುರಿಸಾಧನೆ ಮಾಡುವುದು ಪುಸ್ತಕದ ತಿರುಳು.

ಬೆಲೆ: ರೂ. 100

ದೇಸಿಪುಸ್ತಕ
ವಿಜಯನಗರ, ಬೆಂಗಳೂರು - 40
9845096668

ಪದೋನ್ನತಿ

padonnati

ಜಿ.ಕೆ. ಮಧ್ಯಸ್ಥ

ಕನ್ನಡ ಪತ್ರಕರ್ತರಿಗೆ ಮತ್ತು ಓದುಗರಿಗೆ ಕ್ಲಿಷ್ಟ ಇಂಗ್ಲಿಷ್ ಶಬ್ದಗಳಿಗೆ ಪರ್ಯಾಯ ಕನ್ನಡ ಪದಗಳನ್ನು ಒದಗಿಸುವ ಮೂಲೋದ್ದೇಶವಿಟ್ಟುಕೊಂಡು ವಿಜಯಕರ್ನಾಟಕ ಪತ್ರಿಕೆ ಪ್ರಕಟಿಸಿದ ಅಂಕಣದ ಸಂಗ್ರಹರೂಪ. ಶಬ್ದಗಳ ಅರ್ಥದ ಜೊತೆಗೆ ಅದರ ಹಿನ್ನೆಲೆ, ಹುಟ್ಟು ಏನು ಎಂಬ ಜಿಜ್ಞಾಸೆಯೂ ಈ ಪುಸ್ತಕದಲ್ಲಿದೆ.

ಬೆಲೆ: ರೂ. 200

ಅಂಕಿತ ಪುಸ್ತಕ
53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್
ಗಾಂಧಿಬಜಾರ್ ಮುಖ್ಯರಸ್ತೆ
ಬಸವನಗುಡಿ, ಬೆಂಗಳೂರು - 560 004
080-26617100, 26617755

ಕಂಪ್ಯೂಟರ್ ಊಟ
ಹಳ್ಳಿ ಮಾರಾಟ

computer oota

ಶಿವಾನಂದ ಕಳವೆ

ಜನಪದ, ಕೃಷಿ ಬದುಕು, ಕಾಡು, ಪರಿಸರ ಹೀಗೆ ಜೀವನ್ಮುಖಿ ವಿಷಯಗಳ ಕುರಿತು ಆಳ ಅಧ್ಯಯನವುಳ್ಳ ಅಭಿವೃದ್ಧಿ ಬರಹಗಾರ ಶಿವಾನಂದ ಕಳವೆ ಅವರ ಪುಸ್ತಕ. ಪ್ರಸ್ತುತ ಹಳ್ಳಿ ಬದುಕಿನ ಸೌಂದರ್ಯ, ಅಲ್ಲಿನ ಒಳನೋಟಗಳು ಹಾಗೂ ತುಮುಲಗಳನ್ನು, ಆಧುನೀಕರಣದ ವೈರುಧ್ಯವನ್ನು ಬಿಂಬಿಸುವ ಲೇಖನಗಳ ಸಂಗ್ರಹ. ಲವಲವಿಕೆಯ ನಿರೂಪಣೆ, ಸುಲಲಿತ ಶೈಲಿ, ಸುಸ್ಥಿರ ಬದುಕಿನೆಡೆಗಿನ ತುಡಿತ ಪ್ರತಿ ಬರಹದಲ್ಲೂ ಎದ್ದು ಕಾಣುತ್ತದೆ, ಓದುಗರು ಈ ಕುರಿತು ಚಿಂತಿಸುವಂತೆ ಮಾಡುತ್ತದೆ.

ಬೆಲೆ: ರೂ. 200

ಧಾತ್ರಿ ಪುಸ್ತಕ ಮಾಲೆ
ಸಂಖ್ಯೆ 170, 3ನೇ ಸಿ ಅಡ್ಡರಸ್ತೆ
9ನೇ ಬ್ಲಾಕ್, ವಿನಾಯಕ ಬಡಾವಣೆ
ನಾಗರಬಾವಿ 2ನೇ ಹಂತ, ಬೆಂಗಳೂರು 72
ದೂರವಾಣಿ: 080-2386717

ಹಿತ್ತಿಲು - ಕೈತೋಟಕ್ಕೊಂದು ಕೈಪಿಡಿ

hittilu

ಅನುಸೂಯ ಶರ್ಮ

ಹಿರಿಯ ಲೇಖಕಿ ಅನುಸೂಯ ಶರ್ಮ ತಮ್ಮ ಎರಡು ದಶಕಗಳ ಕೈತೋಟದ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಕೈತೋಟದ ಕುರಿತ ಪ್ರಾಥಮಿಕ ಮಾಹಿತಿಯಿಂದ ಹಿಡಿದು ತರಕಾರಿ ಮೌಲ್ಯವರ್ಧನೆ, ರೋಗ-ಕೀಟ ಬಾಧೆ, ತರಕಾರಿ-ಹಣ್ಣು-ಸಂಬಾರ ಪದಾರ್ಥಗಳ ಮೌಲ್ಯವರ್ಧನೆ ಹೀಗೆ ಕೈತೋಟಕ್ಕೆ ಸಂಬಂಧಿಸಿದ ಹತ್ತಾರು ಮಾಹಿತಿ ಪುಸ್ತಕದಲ್ಲಿ ಅಡಕವಾಗಿದೆ.

ಬೆಲೆ: ರೂ. 100

ಭೂಮಿ ಪ್ರಕಾಶನ
ನಂ.6/32, 'ಕಾಂಚನ ನಿಲಯ'
2ನೇ ಡಿ ಮುಖ್ಯರಸ್ತೆ, 60 ಅಡಿ ರಸ್ತೆ
ಆರ್ಎಂವಿ 2ನೇ ಹಂತ, ಭೂಪಸಂದ್ರ
ಬೆಂಗಳೂರು 560 094
ದೂರವಾಣಿ: 080-23510533
[email protected]

ಚೌಳು ನೆಲದ ಬಂಗಾರ

choulu

ಸಂಪಾದಕರು:
ಮಲ್ಲಿಕಾರ್ಜುನ ಹೊಸಪಾಳ್ಯ, ಶಾಂತಕುಮಾರ್ ಸಿ., ಜಯರಾಮ್ ಜಿ.

ತುಮಕೂರು ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಚೌಳು ಭೂಮಿ ಸಮಸ್ಯೆಯ ಪರಿಹಾರಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಧಾನ್ಯ ಸಂಸ್ಥೆ ತನ್ನ ಚಟುವಟಿಕೆಗಳ ವಿಸ್ತರಣೆಯಾಗಿ ಈ ಪುಸ್ತಕ ಪ್ರಕಟಿಸಿದೆ. ಒಳನಾಡಿನ ಚೌಳುಭತ್ತಗಳು ಹಾಗೂ ಮರೆಯಾಗುತ್ತಿರುವ ಬರದ ನಾಡಿನ ಭತ್ತ ವೈವಿಧ್ಯದ ಕುರಿತು ಪುಸ್ತಕದಲ್ಲಿ ಮಾಹಿತಿ ನೀಡಲಾಗಿದೆ.

ಬೆಲೆ: ರೂ. 40

ತೆನೆ, ಮೊದಲನೇ ಮಹಡಿ, 3ನೇ ಮುಖ್ಯರಸ್ತೆ
ಸದಾಶಿವನಗರ, ತುಮಕೂರು -01
9686194641; 9844031318
[email protected]

ಕನ್ನಡ ಕ್ಲಿಷ್ಟಪದ ಕೋಶ

kannada kosha

ಸಂಪಾದಕರು:
ಜಿ. ವೆಂಕಟಸುಬ್ಬಯ್ಯ

ಅಂತರರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಈ ಎರಡು ಶಬ್ದಗಳಲ್ಲಿ ಯಾವುದು ಸರಿ? ನಿರ್ದೇಶಕ ಅಥವಾ ನಿರ್ದೇಶಕ? ಶುದ್ಧ ಕನ್ನಡದಲ್ಲಿ ಬರೆಯಬೇಕೆನ್ನುವವರಿಗೆ ಈ ರೀತಿಯ ಗೊಂದಲ ಸಾಮಾನ್ಯ. ಇಂತಹ ನೂರಾರು ಸಂದೇಹಗಳಿಗೆ ಕನ್ನಡ ಕ್ಲಿಷ್ಟಪದ ಕೋಶ ಖಚಿತ ಪರಿಹಾರ ನೀಡುತ್ತದೆ. ಕನ್ನಡವನ್ನು ಪ್ರೀತಿಸುವ ಎಲ್ಲರೂ ಹೊಂದಿರಲೇಬೇಕಾದ ಪದಕೋಶವಿದು. ಕನ್ನಡ ಬೋಧಕರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಪತ್ರಕರ್ತರಿಗಂತೂ ಇದು ಬಹಳ ಉಪಯುಕ್ತ.

ಬೆಲೆ: ರೂ.198

ಪ್ರಿಸಂ ಬುಕ್ಸ್ ಪ್ರೈ.ಲಿ.
1865, 10ನೇ ಮುಖ್ಯ ರಸ್ತೆ
32ನೇ ಅಡ್ಡ ರಸ್ತೆ, ಬನಶಂಕರಿ 2ನೇ ಹಂತ
ಬೆಂಗಳೂರು 560 070
ದೂರವಾಣಿ: 080 - 26714108

 


ಪರಿಣಾಮಕಾರಿ ಸಂವಹನ ಕಲೆ

samvahana kale


ನಿರಂಜನ ವಾನಳ್ಳಿ

 

'ಸಂವಹನ ನಮ್ಮ ದೇಹದಲ್ಲಿ ಗೊತ್ತಿಲ್ಲದೇ ಸಂಚರಿಸುವ ರಕ್ತದ ಹಾಗೆ. ಬದುಕಿರುವವರನ್ನು ಶ್ರುತಪಡಿಸುವ ಉಸಿರಾಟದ ಹಾಗೆ. ಆಯಾಚಿತವಾಗಿ ಕೆಲಸ ಮಾಡುವ ಸ್ನಾಯುಗಳ ಹಾಗೆ. ಸುಮ್ಮನೇ ಕುಳಿತರೆ, ಕಾಲು ಕುಣಿಸಿದರೆ, ತಲೆ ಅಲ್ಲಾಡಿಸಿದರೆ, ಕೈ ನೀಡಿದರೆ, ಮುಖ ಕಿವುಚಿದರೆ, ಕಣ್ಣು ಮಿಟುಕಿಸಿದರೆ ... ಏನೇ ಮಾಡಿದರೂ ಸಂವಹನವೇ' ಎನ್ನುವ ಪತ್ರಿಕೋದ್ಯಮ ಬೋಧಕ, ಬರಹಗಾರ ಡಾ. ವಾನಳ್ಳಿ ಸಂವಹನದ ಒಳ ಹೊರಗನ್ನು ಈ ಪುಸ್ತಕದಲ್ಲಿ ಸಾದರಪಡಿಸಿದ್ದಾರೆ.
ರೂ. 40

ಸುಮುಖ ಪ್ರಕಾಶನ
174ಇ/28, 1ನೇ ಮಹಡಿ
1ನೇ ಮುಖ್ಯರಸ್ತೆ, ವಿದ್ಯಾರಣ್ಯನಗರ
ಮಾಗಡಿ ರಸ್ತೆ, ಟೋಲ್ ಗೇಟ್
ಬೆಂಗಳೂರು 560 032
ದೂರವಾಣಿ: 080-23118585

ಕೃಷಿ ಪರಿಸರ ಮತ್ತು ಮಿತ್ರ ಕೀಟಗಳು

ಹೆಚ್.ಕೆ. ಬಸವರಾಜು ಮತ್ತು ಟಿ. ರುದ್ರಮುನಿ

 

'ಶತ್ರು ಕೀಟಗಳು ಮತ್ತು ಅವುಗಳ ಸಂಹಾರ' ಎಂಬ ಶೀರ್ಷಿಕೆಗಳನ್ನೇ ಓದಿ ಅಭ್ಯಾಸವಾದ ನಮಗೆ 'ಕೃಷಿ ಪರಿಸರ ಮತ್ತು ಮಿತ್ರ ಕೀಟಗಳು' ಎಂಬ ಶೀರ್ಷಿಕೆ ಕುತೂಹಲ ಹುಟ್ಟಿಸುತ್ತದೆ. ಲೇಖಕರು ಕೃಷಿ ಬರಹಗಾರರು ಹಾಗೂ ಕೃಷಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪುಸ್ತಕ ಬರೆದಿದ್ದಾರೆ. ಇದಕ್ಕೆ ತಕ್ಕಂತೆ ಈ ಮೂರೂ ವರ್ಗದವರಿಗೆ ಉಪಯುಕ್ತವೆನಿಸುವ ಅನೇಕ ವಿಚಾರಗಳು ಈ ಕೃತಿಯಲ್ಲಿವೆ. ರೂ. 75

ಕೃಷಿ ವಿಕಾಸ್ ಪಬ್ಲಿಕೇಶನ್ಸ್
ನಂ.225, 3ನೇ ಅಡ್ಡರಸ್ತೆ
9ನೇ ಮುಖ್ಯರಸ್ತೆ, ವೃಷಭಾವತಿ ನಗರ
ಕಾಮಾಕ್ಷಿಪಾಳ್ಯ, ಬೆಂಗಳೂರು 560 079


ಅನ್ನ - ಆರೋಗ್ಯ - ಔಷಧ

anna


ವೆಂಕಟರಾಮ ದೈತೋಟ, ಜಯಲಕ್ಷ್ಮೀ ವಿ. ರಾಮ್

 

ನಮ್ಮ ಆಹಾರಕ್ಕೂ ಆರೋಗ್ಯಕ್ಕೂ ನೇರ ನಂಟು. ಈಗಿನ ಅನೇಕ ಆರೋಗ್ಯ ಸಮಸ್ಯೆಗಳಿಗೆ ನಾವು ತಿನ್ನುವ ಆಹಾರ ಪದಾರ್ಥಗಳೇ ಕಾರಣ. ಈ ಹಿನ್ನೆಲೆಯಲ್ಲಿ ಏನನ್ನು ಹೇಗೆ ತಿನ್ನಬೇಕು, ಯಾವುದು ಹೆಚ್ಚು ಹಿತ, ಯಾವುದರಲ್ಲಿ ಔಷಧೀಯ ಗುಣಗಳಿವೆ ಇತ್ಯಾದಿ ವಿಚಾರಗಳನ್ನು ಅತ್ಯಂತ ಸರಳವಾಗಿ ಈ ಪುಸ್ತಕ ಮನಗಾಣಿಸಿಕೊಟ್ಟಿದೆ. ನಮ್ಮ ಪಾರಂಪರಿಕ ಆಹಾರ ವಿಜ್ಞಾನದ ಮೇಲೆಯೂ ಪುಸ್ತಕ ಬೆಳಕುಚೆಲ್ಲಿದೆ. ರೂ. 65

`ಊರ್ವರಾ', ದೈತೋಟ
ಅಂಚೆ: ಪಾಣಾಜೆ, ದಕ್ಷಿಣ ಕನ್ನಡ
ದೂರವಾಣಿ: 04998-226296


ಅಕ್ಕರೆ ಅಕ್ಕಿ - ಭಳಿರೇ ಭತ್ತ

akkare bhatta

ನಾಗೇಶ ಹೆಗಡೆ

 

ಸಾಕಷ್ಟು ಪೌಷ್ಟಿಕಾಂಶಗಳು, ಔಷಧೀಯ ಅಂಶಗಳನ್ನು ಹೊಂದಿರುವ ನಾನಾ ಭತ್ತದ ತಳಿಗಳು ನಮ್ಮಲ್ಲಿ ಇರುವಾಗ ಕುಲಾಂತರಿ ತಳಿಯ ಭತ್ತ ಏಕೆ ಬೇಕು? ಈ ಪ್ರಶ್ನೆಯನ್ನು ಜಗ್ಗತ್ತಿನೆಲ್ಲೆಡೆ ಇಂದು ಜನಪರ ತಜ್ಞರು ಕೇಳುತ್ತಿದ್ದಾರೆ. ಭತ್ತದ ಲೋಕದ ತಲ್ಲಣವನ್ನು ಲೇಖಕರು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಭತ್ತದ ಇತಿಹಾಸ, ಸಂಸ್ಕೃತಿಯನ್ನು ವಿವರಿಸುತ್ತ ಭತ್ತದ ಮುಂದಿರುವ ಸವಾಲುಗಳನ್ನೂ ನಾಗೇಶ ಹೆಗಡೆ ಅವರು ಬಿಡಿಸಿಟ್ಟಿದ್ದಾರೆ.
ರೂ. 25

ಸಹಜ ಸಮೃದ್ಧ
ನಂ.7, 2ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ
ಸುಲ್ತಾನಪಾಳ್ಯ, ಬೆಂಗಳೂರು 560 032
ದೂರವಾಣಿ: 080-22715744


ಸ್ಲೋಫುಡ್ : ಸುಭೋಜನ..ಸಾವಧಾನ...

slow food


ಆನಂದತೀರ್ಥ ಪ್ಯಾಟಿ, ಗಾಣಧಾಳು ಶ್ರೀಕಂಠ

 

ಫಾಸ್ಟ್ ಫುಡ್ ತಂದೊಡ್ಡುತ್ತಿರುವ ಅಪಾಯಗಳ ಬಗ್ಗೆ ಅರಿವು ಮೂಡುತ್ತಿದ್ದಂತೆ ನಮ್ಮ ಪಾರಂಪರಿಕ ಅಡುಗೆಗಳು ಮತ್ತೆ ಚಾಲ್ತಿಗೆ ಬರತೊಡಗಿವೆ. ದೇಸಿ ಆಹಾರ ಪದ್ಧತಿಯನ್ನು ಬೆಂಬಲಿಸುವ `ಸ್ಲೋ ಫುಡ್' ಚಳವಳಿಗೆ ಇಂದು ಎಲ್ಲೆಡೆ ಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವಾಗಿ ಈ ಕೃತಿ.
ರೂ. 50

ಎರಾ ಆರ್ಗ್ಯಾನಿಕ್
ನಂ.348, ಡಾಲರ್ಸ್ ಕಾಲೊನಿ
ಆರ್.ಎಂ.ವಿ. ಕ್ಲಬ್, ಡಬಲ್ ರೋಡ್
ಆರ್.ಎಂ.ವಿ ಎರಡನೇ ಹಂತ
ಬೆಂಗಳೂರು 560 094
ದೂರವಾಣಿ : 080-41606003


ಮೇಟಿಯ ನೆರಳು

metiya neralu

ಈರಯ್ಯ ಕಿಲ್ಲೇದಾರ

 

ಕಳೆದ ಮೂರು ದಶಕಗಳಿಂದ ಒಕ್ಕಲುತನದಲ್ಲಿ ತೊಡಗಿರುವ ಈರಯ್ಯ ಕಿಲ್ಲೇದಾರ ,ಕೃಷಿರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ವಿಶ್ಲೇಷಿಸುವುದರ ಜತೆಗೆ ಕೃಷಿವಲಯದಲ್ಲಿನ ಹೊಸ ಬೆಳವಣಿಗೆಗಳ ಕುರಿತು ಕೂಡ ಅವರು ಈ ಕೃತಿಯಲ್ಲಿ ಕ್ಷಕಿರಣ ನೋಟ ಬೀರಿದ್ದಾರೆ.
ರೂ. 65

ಕವಿತಾ ಪ್ರಕಾಶನ
ಗುಡಿಕಟ್ಟಿ, ಬೆಳಗಾವಿ ಜಿಲ್ಲೆ 591 104
ದೂರವಾಣಿ: 9731575119

ಕಟ್ಟಗಳು : ಅನುಶೋಧನೆಗಳು ಮತ್ತು ವಾರಣಾಶಿ ಮಾದರಿ

katta

ಶ್ರೀ ಪಡ್ರೆ, ಡಾ. ವಾರಣಾಶಿ ಕೃಷ್ಣಮೂರ್ತಿ

 

ಕರಾವಳಿಯ ಪಾರಂಪರಿಕ ಜಲಸಂರಕ್ಷಣಾ ವ್ಯವಸ್ಥೆಗಳ ಪೈಕಿ ಕಟ್ಟಗಳು ಕೂಡ ಒಂದು. ಇವು ದೇಶದ ಇತರೆಡೆಗಳಲ್ಲಿಯೂ ಕಂಡುಬರುತ್ತವೆ. ಕಟ್ಟಗಳ ನಿರ್ಮಾಣದಲ್ಲಿ ಸ್ಥಳೀಯರ ಜಾಣ್ಮೆ, ಅನುಶೋಧನೇ ಮುಖ್ಯ. ಇದು ಅಪ್ಪಟ ರೈತ ತಂತ್ರಜ್ಞಾನ. ಆದ್ದರಿಂದಲೇ ಕಟ್ಟ ಎಂದರೆ ಗ್ರಾಮೀಣ ಜಲಕೌಶಲದ ಪ್ರತೀಕ. ಹೌದು. ಕಟ್ಟ ಜಗತ್ತಿನ ವೈಶಿಷ್ಟ್ಯಗಳನ್ನು ಈ ಪುಸ್ತಕದಲ್ಲಿ ವಿವಿಧ ಲೇಖಕರು ದಾಖಲಿಸಿದ್ದಾರೆ.
ರೂ. 120

ವಾರಣಾಶಿ ಸಂಶೋಧನಾ ಪ್ರತಿಷ್ಠಾನ
ಅಂಚೆ: ಅಡ್ಯನಡ್ಕ
ಬಂಟ್ವಾಳ ತಾಲೂಕು 574 260
ದೂರವಾಣಿ: 08255-270254


ಸಮುದಾಯ ರೇಡಿಯೋ


ಎಂ. ಅಬ್ದುಲ್ ರೆಹಮಾನ್ ಪಾಷ

 

ಅಭಿವೃದ್ಧಿ ಸಂವಹನದಲ್ಲಿ ಸಮುದಾಯ ಬಾನುಲಿಯ ಪಾತ್ರ, ಅದರ ಸ್ವರೂಪ, ಕೇಂದ್ರ ಸ್ಥಾಪನೆಗೆ ಅನುಸರಿಸಬೇಕಾದ ನಿಯಮಗಳು ಇವೇ ಮುಂತಾದ ವಿಚಾರಗಳನ್ನು ಲೇಖಕ, ಹಿರಿಯ ಮಾಧ್ಯಮತಜ್ಞ ಅಬ್ದುಲ್ ರೆಹಮಾನ್ ಪಾಷ ಸರಳವಾಗಿ ನಿರೂಪಿಸಿದ್ದಾರೆ.

ವಾರ್ತಾ ಇಲಾಖೆ
2ನೇ ಮಹಡಿ, ಬಿ.ಎಂ.ಟಿ.ಸಿ. ಕಟ್ಟಡ
ಶಿವಾಜಿನಗರ, ಬೆಂಗಳೂರು 560051

‘ಪುಸ್ತಕ ಪರಿಚಯ'ಕ್ಕೆ ಸೂಕ್ತವೆನಿಸುವ ಪುಸ್ತಕಗಳನ್ನು ಕೇಂದ್ರಕ್ಕೆ ಕಳುಹಿಸಿಕೊಡಬಹುದು.
ಪುಟದ ಮೇಲಕ್ಕೆ
 
  © Centre for Agricultural Media